ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಿಜರಾಜಯೋಗಿ, ಸ್ವಾತಂತ್ರ್ಯ ಹೊರಾಟಗಾರರು, ಮಹಾಮಾನವತಾವಾದಿ, ಸರ್ವೋದಯದ ಹರಿಕಾರರು ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜೀಯವರ ಜೀವನಾಧಾರಿತ ಚಲನಚಿತ್ರ “ಕ್ರಾಂತಿಯೋಗಿ ಮಹಾದೇವರು” ೨೦೧೮ (2018)ರಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿ ತೆರೆಕಂಡು ಜನಮನಸೆಳೆದದ್ದು ಇತಿಹಾಸ. ... ಆಧುನಿಕತೆಯ ಈ ಪ್ರಪಂಚದಲ್ಲಿ ಸಕಲರಿಗೂ ಆತ್ಮಜ್ಞಾನ, ಗುರುಸೇವೆ, ನಾಮೋಪದೇಶ, ನಾಮಸ್ಮರಣೆ, ಆತ್ಮ ಸಾಕ್ಷಾತ್ಕಾರದ ಜೊತೆಗೆ ಸರ್ವರೂ ಸಮಾನತೆಯಿಂದ ಬದುಕಿ ಮೊಕ್ಷ ಹೊಂದಲು ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಸದ್ಗುರುಗಳು ನಾಮಸ್ಮರಣೆಯ ಮಾರ್ಗ ದರ್ಶನವನ್ನು ನೀಡಿದ್ದಾರೆ. ಜ್ಞಾನಾರ್ಜನೆಗೆ ಜನ ಸಮುದಾಯಕ್ಕೆ ಚರಿತ್ರೆಯ ಪುಸ್ತಕ ಎಷ್ಟು ಮುಖ್ಯವೋ ಹಾಗೆಯೇ ಓದು ಬಲ್ಲವ ಓದು ಬಾರದೇ ಇರುವವರಿಗೆ ಅತ್ಯಂತ ಪ್ರಭಾವಿಕಾರಿಯಾಗಿರುವುದು ದೃಶ್ಯಮಾಧ್ಯಮ, ಅದರಲ್ಲೂ ಚಲನಚಿತ್ರಗಳ ಪಾತ್ರ ಬಹುಮುಖ್ಯವಾಗಿದೆ. ಈಗ ಶ್ರೀ ಸದ್ಗುರುಗಳ ಆಶಿರ್ವಾದದೊಂದಿಗೆ ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಲನಚಿತ್ರ ನಿರ್ಮಾಣವಾಗುತ್ತಿದ್ದು “KANNADA OTT” (ಕನ್ನಡ ಓಟಿಟಿ) ವೆಬ್ಸೈಟ್ ಮೂಲಕ ಕೆಲವೇ ದಿನಗಳಲ್ಲಿ ತಾವೆಲ್ಲರೂ ವಿಕ್ಷಿಸಬಹುದು. ಕೂಡಲೇ ತಮ್ಮ ಮೊಬೈಲ್ ಪೋನ್ ಅಥವಾ ಸ್ಮಾರ್ಟ TV ಗಳಲ್ಲಿ Google Searchನಲ್ಲಿ “KANNADA OTT” ವೆಬ್ಸೈಟ್ ಮುಖಾಂತರ ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಲನಚಿತ್ರ ಕನ್ನಡ ಚಿತ್ರ ರಂಗದಲ್ಲಿ ಒಂದು ದಾಖಲೆಯ ವಿಕ್ಷಣೆಯಾಗಲು ಸಹಕರಿಸಿ ಶ್ರೀ ಸ.ಸ. ಸಂಗಮೇಶ್ವರ ಮಹಾರಾಜರ ಆಶಿರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿ. ( ವಿಶೇಷ ಸೂಚನೆ : ಕನ್ನಡ ಓಟಿಟಿ KANNADA OTT ಯಲ್ಲಿ ಈಗಾಗಲೇ ತಾವು ತಮ್ಮ ಪೋನ್ ಅಥವಾ ಟಿವಿ ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದರೆ ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಲನಚಿತ್ರದ ಬಿಡುಗಡೆಯ ಮಾಹಿತಿಗಾಗಿ ಸಂಪರ್ಕಿಸಿ : 9902523698 ಮಾಧವಾನಂದ Producer.)